Monday, December 18, 2017

ಯುವ ಶಕ್ತಿ

ನಾವು ಸಣ್ಣವರಿದ್ದಾಗ ಅತಿಯಾದ ಜನ ಸಂಖ್ಯೆಯನ್ನು ಶಾಪವಾಗಿ ಪರಿಗಣಿಸಲಾಗುತ್ತಿತ್ತು. ಶಾಲೆಗಳ ಸಮಾಜಶಾಸ್ರದ ಪಾಠಗಳಲ್ಲಿ ಭಾರತ ಹಿಂದುಳಿದ ದೇಶವಾಗಿರಲು ಜನ ಸಂಖ್ಯೆಯನ್ನು ದೂರಲಾಗುತ್ತಿತ್ತು. ದಿನ ಕಳೆದಂತೆ ಭಾರತದ  ಜನ ಸಂಖ್ಯೆ ವರವಾಗಲಾರಂಭಿಸಿತು. ಜನರನ್ನು ಬಳಕೆದಾರರಾಗಿ ಪರಿಗಣಿಸಿದಾಗ, ಭಾರವಾಗಿದ್ದ ಜನ ಪ್ರಗತಿಯ ಪ್ರತೀಕವಾಗ ತೂಡಗಿದರು. ಜನ ಸಾಂದ್ರತೆ ಕಮ್ಮಿ ಇದ್ದ ಅಮೇರಿಕ, ಐರೋಪ್ಯ ರಾಷ್ಟ್ರಗಳ ಕಡೆ ಹೂಗಲಾರಂಭಿಸಿ ಊರ್ಜತವಾದರು. ದೇಶದ ಯುವ ಜನಾಂಗ ದೇಶದ ಸಂಪತ್ತು ಎಂದು ಸಂಬ್ರಮಪಟ್ಟ ಜನ, ಮೀಸಲಾತಿಯೆಂಬ ರಕ್ಕಸನ ಹಿಡಿತದಿಂದ ತಪ್ಪಿಸಿಕೂಳ್ಳಲು ಪಲಾಯನಗೈದ ಪ್ರತಿಭಾವಂತ ಯುವಕರ ಬಗ್ಗೆ ತಲೆಕೆಡಿಸಿ ಕೂಳ್ಳಲಿಲ್ಲ.

ಅಧಿಕಾರ ದಾಹದಿಂದ ರಾಜಕೀಯ ಪಕ್ಷಗಳು ಜಾತಿಯ ಆಧಾರದ ಮೇಲೆ ಮೀಸಲಾತಿ ಅಂದಾಗ, ನಾಚಿ ಅದನ್ನು ತಿರಸ್ಕರಿಸುವ ಬದಲು ಅದನ್ನು ನಮಗೂ ಬೇಕು, ನಮಗೂ ಬೇಕೆಂದು ಹೂರಾಡುವ ಜನ ಅದೇ ಹೋರಾಟದ ಛಲವನ್ನು ವಿಧ್ಯೆಯಲ್ಲಿ ಸರಿದೂಗಲು ಉಪಯೂಗಿಸಿದ್ದರೆ ನಮ್ಮದೇಶವೂ ಇವತ್ತು ಬೇರೆಲ್ಲ ಅಭಿವೃಧಿಯಾದ ದೇಶಗಳ ಮುಂಚೂಣಿಯಲ್ಲಿರುತ್ತಿತ್ತು. ರಾಜಕಾರಣಿಗಳು ಮತ್ತೆ ಮತ್ತೆ ನಮ್ಮನ್ನು ಲೂಟಿ ಮಾಡುವ ಅವಕಾಶವಿರುತ್ತಿರಲ್ಲಿಲ್ಲ.
ಒಂದು ರೂಪಾಯಿಗೆ ಅಕ್ಕಿ ಕೂಡುವುದಕ್ಕಿಂತ,  50ರೂಪಾಯಿ ಅಕ್ಕಿ ಖರೀದಿ ಮಾಡುವ ಸಾಮರ್ಥ್ಯ ಒದಗಿಸುವ ರಾಜಕಾರಣಿ ಬೇಕೆಂದು ನಮಗೆ ಅನ್ನಿಸಲೇ ಇಲ್ಲ. ಕೆಲವು ರಾಜ್ಯಗಳಲ್ಲಿ ಚುನಾವಣೆಯ ಸಮಯದಲ್ಲಿ ಸಂಭಾವನೆಯಾಗಿ ಸಿಕ್ಕ ಟೆಲಿವಿಷನ್ ಜನತೆಯನ್ನು ಅದೆಷ್ಟು ಸೂಮಾರಿಗಳನ್ನಾಗಿ ಮಾಡಿತ್ತೆಂದರೆ ಮುಂದಿನ ಚುಣಾವಣೆಯಲ್ಲಿ ಜನ ಉದ್ಯೋಗ ಕೇಳಲು ಮರೆತರು. ಕೇವಲ ಬಿಟ್ಟಿ ಜೀವನಕ್ಕೆ ಒಗ್ಗಿ ಹೋದರು.

ಯುವ ಜನರನ್ನು ಸೊಮಾರಿಯಾಗಿಸುವ ಷಡ್ಯಂತ್ರ ರಾಜಕೀಯ ರಂಗ ಸತತವಾಗಿ ಮಾಡುತ್ತಿದ್ದರೆ, ಯುವ ಜನಾಂಗ ತಮ್ಮ ಕುರುಡು ಬುದ್ಧಿಯಿಂದ ದೇಶ ನಾಶ ಮಾಡುತ್ತಿದೆ. ಇದೇ ಕಾರಣಗಳಿಂದ ಭಾರತದ ಯುವ ಜನ ಅಸಹನೀಯರೂ ಸ್ವಾರ್ಥಿಗಳೂ ಆಗುತ್ತಿದ್ದಾರೆ.
ವಿಧ್ಯೆಯಿಂದ ವಿನಯ ಮರೆತು, ಧ್ರಾಷ್ಟ್ಯರಾಗುತ್ತಿದ್ದಾರೆ.

ಇದು ನನ್ನ ಸ್ವಂತದ ಅನುಭವಗಳು. ಕಳೆದ ಹನ್ನೆರಡು ವರ್ಷಗಳನ್ನು ಪರದೇಶದಲ್ಲಿ ಕಳೆದರೂ, ಬಹು ಪಾಲು ಬಾಲ್ಯ ಯವ್ವನವನ್ನು ಭಾರತದಲ್ಲಿ ಕಳೆದಿದ್ದೇನೆ, ಈಗ ವರ್ಷಕೂಮ್ಮೆ ಭಾರತದಲ್ಲಿ ಕಳೆವ ಎರಡು ಮೂರು ವಾರಗಳು ಕೆಲವೂಮ್ಮೆ ಅಚ್ಚರಿ ಹುಟ್ಟಿಸುತ್ತದೆ.
ಬೆಳಿಗ್ಗಿ ಬ್ಯಾಂಕಿಗೆ ಹೋಗಿ ಬಾಗಿಲ ಬಳಿ ಸರತಿ ನಿಂತಿದ್ದೆ. ಬಾಗಿಲು ತೆರೆದಾಗ ನನ್ನ ಹಿಂದೆ ನಿಂತಿದ್ದ ಜನ ನನ್ನನ್ನು ಬದಿಗೆ ಸರಿಸಿ ಒಳಗೆ ಹೋದಾಗ ಬಾರದ ಸಿಟ್ಟು, ಒಬ್ಬ ಹೆಂಗಸಿಗೋಸ್ಕರ ಬಾಗಿಲು ತೆರೆದು ಹಿಡಿದಾಗ ನುಗ್ಗಿ ಹೂದ ಮೂವ್ವರು ಯುವಕರನ್ನು ನೋಡಿದಾಗ ಬಂದಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ನನ್ನನ್ನು ಕಡೆಗಣಿಸಿ, ಕಂಡೂ ಕಾಣದಂತೆ ಮುನ್ನುಗಿ ಹೋದ ವ್ಯಕ್ತಿಯ ಮೇಲಾಗದ ಸಿಟ್ಟು; ಹಣ್ಣು ಮದುಕಿಯೂಬ್ಬಳನ್ನು ಬದಿಗೆ ಸರಿಸಿ ಮುಂದೆ ಹೋದ ಯುವಕನ ಮೇಲಾಗಿತ್ತು.
ಇಂಥಃ ಯುವ ಜನಾಂಗ ದೇಶದ ಅಭಿವೃದ್ದಿಗೆ ಎಷ್ಟು ಸಹಕರಿಸ ಬಹುದು?
ನಮ್ಮ ದೇಶದ ಅಭಿವೃದ್ದಿಯ ಮಾಪನಗಳಾವುವು?. ತಿಂಗಳು ತಿಂಗಳು ಬರುವ ಸಂಬಳ?, ಹತ್ತಾರು ಮರ ಕಡಿದು ಕಟ್ಟಿದ ಮನೆಯ ವಿಸ್ತೀರ್ಣ?, ತಂದೆ ತಾಯಿಗಳನ್ನು ಮನೆಯಿಂದ ಹೊರಗಟ್ಟಿ ಬ್ಯಾಂಕ್ ನಲ್ಲಿ ಇಟ್ಟ ಹಣದ ಮೊತ್ತ? ಹೀಗೆ ಅಭಿವೃದ್ದಿಯನ್ನು ಅಳೆವ ಸಮಾಜದಲ್ಲಿ ನಮ್ಮ ಯುವಜನತೆ ಸ್ವಾರ್ಥಿಗಳಾಗುತ್ತಿರಲು, ಅವರು ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತಾರೆನ್ನುವ ಮಾತಿನಲ್ಲಿ ನನಗೆ ದಟ್ಟವಾದ ಸಂಶಯಗಳಿವೆ.

ಪಾಶ್ಚಮಾತ್ಯರನ್ನು ಬೈಯುವುದು ಸುಲಭ ಆದರೆ ಒಂದಂಶ ಅವರ ಬದುಕಿನ ಒಳ್ಳೆಯ ಗುಣಗಳನ್ನು ರೂಢಿಸಿಕೂಳ್ಳುವುದು ನಮ್ಮ ಯುವ ಜನತೆಗೆ ಕಷ್ಟದ ಮಾತು. ನಾವು ಭಗವಧ್ಗೀತೆಯನ್ನು ಜಗತ್ತಿಗೆ ಕೂಟ್ಟಿರಬಹುದು ಆದರೆ ಇಂದು ಅದನ್ನು ಬದುಕಲ್ಲಿ ಅಳವಡಿಸಿಕೂಂಡ ಭಾರತೀಯರೆಷ್ಟುಮಂದಿ?

ಒಂದು ದೇಶದ ಬೆಳವಣಿಗೆಗೆ ಪ್ರಜ್ಞಾವಂತ, ಪರಸಹಿಷ್ಣು ಯುವಜನ ಬೇಕೇ ಹೂರತು ಪ್ರಜ್ಞಾಹೀನ, ಸ್ವಾರ್ಥಿ ಯುವ ಜನಾಂಗವಲ್ಲ. ನಾವು ಲೆಕ್ಕಕ್ಕಾಗಿ ಇರುವ ಯುವ ಜನರ ಲೆಕ್ಕ ಬಿಟ್ಟು ಗುಣಮಟ್ಟವಿರುವ ಯುವಕರನ್ನು ಸಮಾಜಕ್ಕೆ ಕೂಡುವ ಕೆಲಸ ಮಾಡಬೇಕು. ಈ ಸಮಾಜವೇ ಯುವ ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಎಡಪಂಕ್ತಿಯ ನಿಲುವನ್ನು ಬಿಟ್ಟು ದೇಶಕ್ಕಾಗಿ ಸಮಾಜಕ್ಕಾಗಿ ಬದುಕುವ ಮನೋಭಾವದ ಯುವಕರಿಗೆ ಅವಕಾಶ ಕಲ್ಪಿಸಿ ಕೂಡಬೇಕು